<ಮಂಕುತಿಮ್ಮನ ಕಗ್ಗ
<ಮಂಕುತಿಮ್ಮನ ಕಗ್ಗ-ಕಂತು ೧೨.ಪದ್ಯ ೩೩೧ ರಿಂದ ೩೬೦ ರ ವರೆಗೆ:ಅರ್ಥಸಹಿತ.
ಮಂಕುತಿಮ್ಮನ ಕಗ್ಗ; :ಅರ್ಥಸಹಿತ
ಪದ್ಯ – ೩೬೧/361
ಎಲ್ಲಿಯೋ ವಿಧಿಯ ಗೂಢದ ಕರ್ಮಶಾಲೆಯಲಿ। 
ನಿಲ್ಲದಾಡುತ್ತಿಹವು ಯಂತ್ರ ಕೀಲುಗಳು॥ 
ಎಲ್ಲಾ ಆಗುಹೋಗುಗಳುಮಾ ಚಕ್ರಗತಿಯಂತೆ। 
ತಲ್ಲಣವು ನಿನಗೇಕೆ? ಮಂಕುತಿಮ್ಮ ॥
 ನಿಲ್ಲದಾಡುತ್ತಿಹವು=ನಿಲ್ಲದೆ+ಆಡುತಿಹವು,ಆಗುಹೋಗುಗಳುಮಾ = ಆಗುಹೋಗುಗಳುಂ+ಆ,
 ಬಹಳ ಗುಪ್ತವಾಗಿ ನಡೆಯುವ ವಿಧಿಯ ಕಾರ್ಯಾಂಗದಲ್ಲಿ ಜಗತ್ತಿನ ಎಲ್ಲ ಜೀವಿಗಳ ಆಗುಹೋಗುಗಳ ನಿರ್ಣಯಿಸುವ ಚಕ್ರವು ನಿರಂತರವಾಗಿ ತಿರುಗುತ್ತಿರುತ್ತದೆ. ಅದು ಗೂಡತೆಯಿಂದ ನಡೆಯುತ್ತಿದೆ ಮತ್ತು ಅದು ನಿನಗೆ ಅರ್ಥವಾಗದ ವಿಷಯವಾದದ್ದರಿಂದ,ನೀ ಏಕೆ ತಲ್ಲಣ ಪಡುತ್ತೀಯೆ.
ಮಂಕುತಿಮ್ಮನ ಕಗ್ಗ - ಡಿ.ವಿ.ಜಿ.
♠೫೫೫೫೫೫೫೫೫೫೫೫೫೫೫೫೫೫♠
-೦♦♦♣♣♣♣♣♣♣♣♣♣♣♣♦♦೦-
ನೋಡಿ
<ಮಂಕುತಿಮ್ಮನ ಕಗ್ಗ-ಕಂತು ೧೧. 
ಮಂಕುತಿಮ್ಮನ ಕಗ್ಗ-ಕಂತು ೪.> 

ನೋಡಿ

ಉಲ್ಲೇಖ
 ಮಂಕುತಿಮ್ಮನ ಕಗ್ಗ
ವರ್ಗ: ಡಿ.ವಿ.ಜಿ. ಸಾಹಿತ್ಯ